ಹೃದಯದ ಮೂಲಕವೇ ನಾವೆಲ್ಲರೂ ಪರಸ್ಪರ ಸಂಬಂಧವನ್ನು ಹೊಂದಿದ್ದೇವೆ.
ಮನಸ್ಸು, ಬುದ್ಧಿಶಕ್ತಿ ಮತ್ತು ವಿವೇಕಗಳ ವ್ಯವಸ್ಥಿತ ರಚನೆಗೆ ಧ್ಯಾನವು ಅಗತ್ಯ.
ಹೃದಯವು ಪರಿಶುದ್ಧ ಮತ್ತು ಸರಳವಾಗಿರುವ ತನಕ, ಅದು ಸರಿಯಾದ ಉತ್ತರವನ್ನೇ ನೀಡುತ್ತದೆ.
'ಅಜ್ಞಾನಿ' ಎಂದರೆ 'ಜ್ಞಾನ ಅಥವಾ ತಿಳಿವಳಿಕೆಯಿಲ್ಲದವನು' ಎಂದರ್ಥವಲ್ಲ. ಆದರೆ 'ಆ ಜ್ಞಾನದ ಉದ್ದೇಶ ಅಥವಾ ಜ್ಞಾನದ ಅರ್ಥವನ್ನು ತಿಳಿಯದವನು' ಎಂದರ್ಥ.
ಹೃದಯದ ಮುಕ್ತತೆ ಪ್ರೀತಿಯನ್ನು ಸೃಷ್ಟಿಸುತ್ತದೆ. ಪ್ರೀತಿ ನಿಮ್ಮ ಮೂಲಕ ಹರಿಯುತ್ತಿದ್ದರೆ, ನೀವು ಪರಿಶುದ್ಧರಾಗಿ ಉಳಿಯುತ್ತೀರಿ.
ನಿಜವಾದ ಧ್ಯಾನದಲ್ಲಿ, ನಾವು ಸಂಪೂರ್ಣ ಅನುಭವಶೂನ್ಯ ಸ್ಥಿತಿಯನ್ನು ಪ್ರವೇಶಿಸುತ್ತೇವೆ.
ಕನಿಷ್ಠ ಚಟುವಟಿಕೆಗಳಿಂದ ಗರಿಷ್ಠ ಫಲವನ್ನು ಪಡೆಯುವುದೇ ವಿವೇಕ.
ಯಾರಿಗಾದರೂ ತಮ್ಮ ಸಂಕಲ್ಪವನ್ನು ವಿಷಪೂರಿತವನ್ನಾಗಿ ಮಾಡಬೇಕಾದರೆ, ಸಂಶಯವನ್ನು ಬೆಳೆಸಿಕೊಳ್ಳಿ.
ನಮ್ಮ ಆಂತರಿಕ ನೆಮ್ಮದಿ, ಶಾಂತಿ ಮತ್ತು ಸಂತೋಷದಾಯಕ ಸ್ಥಿತಿಗಳನ್ನು ಹರಡುತ್ತಲೇ ಇರೋಣ.
ನಿಮ್ಮ ಹೃದಯವನ್ನು ಎಲ್ಲರೆದುರು ತೆರೆದಿಡುವ ಧೈರ್ಯ ನಿಮ್ಮಲ್ಲಿರಲಿ.
ಅಹಂ ಅನ್ನು ನೀವು ಮತ್ತಷ್ಟು ಉತ್ತಮವಾಗಲು ಬಳಸಿಕೊಳ್ಳುವವರೆಗೂ ಅದು ಕೆಟ್ಟದ್ದಲ್ಲ.
ಪ್ರಕಟಗೊಳ್ಳದಿದ್ದರೆ ಜೀವಕ್ಕೆ ಅಸ್ತಿತ್ವವಿರದು.
ಆತ್ಮಾವಲೋಕನದಿಂದ ವಿವೇಕ ಬೆಳೆಯುತ್ತದೆ ಎಂಬುದು ವಾಸ್ತವ, ಆದರೆ ಇದಕ್ಕೆ ಸಮಯ ಯಾರಿಗಿದೆ? ಯಾರು ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೋ, ಅವರಿಗೆ ಸಮಯ ದೊರಕುತ್ತದೆ.
ನಾವು ಏನು ಮಾಡಿದರೂ, ಅದರಲ್ಲಿ ಉತ್ಕೃಷ್ಟತೆಯನ್ನು ಸಾಧಿಸಬೇಕು, ಆದರೆ ಅದಕ್ಕೂ ಅಹಂಕಾರಕ್ಕೂ ಯಾವುದೇ ಸಂಬಂಧವಿಲ್ಲ.
ಸಂತೋಷವು ಇಚ್ಛೆಗಳ ಜೊತೆ ವಿಲೋಮ ಸಂಬಂಧ ಹೊಂದಿರುತ್ತದೆ.
ಒಬ್ಬನು ಓಡಿ ಗುರಿಯನ್ನು ಮುಟ್ಟಿದರೆ, ಮತ್ತೋರ್ವನು ನಡೆದು ಗುರಿ ಸೇರುವನು, ವ್ಯತ್ಯಾಸವೇನಿದೆ? ಒಬ್ಬ ಸಮಯ ಉಳಿಸುವನು, ಮತ್ತೊಬ್ಬ ಸಮಯ ಕಳೆಯುವನು.