ಮನೋಧಾರೆಯು ದೇಹದಾದ್ಯಂತ, ತಲೆಯಿಂದ ಪಾದದವರೆಗೂ ಧಾರೆಯ ರೂಪದಲ್ಲಿ, ರಕ್ತನಾಳಗಳು ಮತ್ತು ಅಪಧಮನಿಗಳ ಮೂಲಕ ಹರಿಯುತ್ತದೆ. ಅದು ನೆಲೆಸಿದ ಸ್ಥಳದಲ್ಲಿ ಆನಂದದ ಅನುಭವವಾಗುತ್ತದೆ. ಅಲ್ಲಿಂದ ಅದನ್ನು ಬಲವಂತದಿಂದ ತೆಗೆದುಹಾಕಿದಾಗ ದುಃಖದ ಅನುಭವವಾಗುತ್ತದೆ.
ಲಾಲಾಜಿ
January 30th 2025
ಶಿಸ್ತು ಲೌಕಿಕ ಅನುರಕ್ತಿಯ ಆಧಾರವನ್ನು ಸರಿಪಡಿಸುತ್ತದೆ, ಸದ್ಗುಣಶೀಲ ತತ್ವಗಳಿಂದ ಹೃದಯವನ್ನು ಪೋಷಿಸುತ್ತದೆ, ಉಪಯುಕ್ತ ಜ್ಞಾನದಿಂದ ಮನವನ್ನು ಪ್ರಕಾಶಿತಗೊಳಿಸುತ್ತದೆ ಹಾಗು ಆಂತರ್ಯದಲ್ಲಿ ಸಂತಸವನ್ನು ಉಂಟುಮಾಡುತ್ತದೆ.
ಲಾಲಾಜಿ
January 29th 2025
ಜೀವನವನ್ನು ಸರಳಗೊಳಿಸಿ, ಅವಶ್ಯಕ ವಿಷಯಗಳ ಮೇಲೆ ಕೇಂದ್ರೀಕರಿಸುವುದೇ ಆಧ್ಯಾತ್ಮಿಕ ಪ್ರಗತಿ.
ದಾಜಿ
January 28th 2025
ಒರಟೊರಟಾದ ಸಿದ್ಧಸಾಮಗ್ರಿಗಿಂತ ಕಟ್ಟಿಗೆಯ ಕೊರಡೇ ಲೇಸು, ಏಕೆಂದರೆ, ನಮಗೆ ಬೇಕಾದ ಯೋಗ್ಯ ಆಕಾರವನ್ನು ಕೊಟ್ಟು ಅದನ್ನು ಪರಿವರ್ತಿಸಲು ಸಾಧ್ಯವೇ ಇಲ್ಲ.
ಬಾಬೂಜಿ
January 27th 2025
ಯಾವಾಗಲೂ ನೀಡುತ್ತಲೇ ಇರುವವರು ಎಂದಿಗೂ ಬರಿದಾಗಲಾರರು.
ಚಾರೀಜಿ
January 26th 2025
ಹಾರ್ಟ್ ಫುಲ್ ನೆಸ್ ಅಭ್ಯಾಸ ಎಂದರೆ ತನ್ನ ಹೃದಯಾಂತರಾಳದಲ್ಲಿ ತನ್ನನ್ನು ಕೇಂದ್ರೀಕರಿಸಿಕೊಳ್ಳುವುದು ಹಾಗು ಅಲ್ಲಿ ನಿಜವಾದ ಅರ್ಥ ಮತ್ತು ಸಂತೃಪ್ತಿಯನ್ನು ಕಂಡುಕೊಳ್ಳುವುದು.
ದಾಜಿ
January 25th 2025
ಸಾಧಕನಲ್ಲಿ ಪ್ರಕ್ಷುಬ್ಧತೆ ಇದ್ದಾಗ, ಅದರ ಬಲವು ಆತನಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಪ್ರಾಣಾಹುತಿಯು ಹರಿದು ಅದನ್ನು ಸ್ಥಿರಗೊಳಿಸುತ್ತದೆ.
ಬಾಬೂಜಿ
January 24th 2025
ನಿಮ್ಮನ್ನು ಸೃಷ್ಟಿಸಲಾದ ಉದ್ದೇಶವನ್ನು ಎಂದಿಗೂ ಪ್ರಶ್ನಿಸಬೇಡಿ - ಅದನ್ನು ಕಂಡು ಹಿಡಿದು, ಪೂರೈಸಲು ಪ್ರಯತ್ನಿಸಿ.
ಚಾರೀಜಿ
January 23rd 2025
ಶಾಂತಿಯಿಲ್ಲದೆ ನಾವು ಸೃಜನಾತ್ಮಕವಾಗಿರಲು ಸಾಧ್ಯವಿಲ್ಲ.
ದಾಜಿ
January 22nd 2025
ನಾವು ನಮ್ಮ ಪ್ರಜ್ಞೆಯನ್ನು ಹೆಚ್ಚು ಹೆಚ್ಚು ವಿಸ್ತರಿಸಿದಾಗ, ಧರ್ಮವನ್ನು ಮೀರಿ, ಆಧ್ಯಾತ್ಮಿಕತೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತೇವೆ.
ಬಾಬೂಜಿ
January 21st 2025
ಹೃದಯಕ್ಕೆ ಸರಿಯೆನ್ನಿಸಿದಾಗ, ಮನಸ್ಸು ಮತ್ತು ಹೃದಯದ ನಡುವೆ ಸದಾ ಒಂದು ಪ್ರಶ್ನಾತೀತ ಒಪ್ಪಂದವಿರುತ್ತದೆ.
ದಾಜಿ
January 20th 2025
ನಿಜವಾದ ಪ್ರೀತಿಯಲ್ಲಿ, ಪ್ರೀತಿ ಮಾತ್ರ ಅಸ್ತಿತ್ವದಲ್ಲಿದ್ದು, ಅದರಲ್ಲಿ ಪ್ರೇಮಿ ಮತ್ತು ಪ್ರಿಯತಮರಿಬ್ಬರೂ ವಿಲೀನರಾಗಿರುತ್ತಾರೆ .
ದಾಜಿ
January 19th 2025
ನಿಮ್ಮನ್ನು ಬದಲಾಯಿಸಿಕೊಳ್ಳಿ, ಏಕೆಂದರೆ ನೀವು ಬದಲಾಗದಿದ್ದರೆ, ಯಾರನ್ನೂ ಬದಲಾಯಿಸಲಾರಿರಿ.
ಚಾರೀಜಿ
January 18th 2025
ನಮ್ಮ ಧ್ಯಾನದ ಗುಣಮಟ್ಟವು ನಮ್ಮ ಮನೋಭಾವದ ಮೇಲೆ ಅವಲಂಬಿತವಾಗಿರುತ್ತದೆ, ಧ್ಯಾನಾವಧಿಯ ಮೇಲೆ ಅಲ್ಲ.
ದಾಜಿ
January 17th 2025
ಸಮತ್ವದ ಸ್ಥಿತಿಯನ್ನು ಸಾಧಿಸಿ, ಪ್ರಕೃತಿಯೊಂದಿಗೆ ಸಾರೂಪ್ಯವಾಗಿರುವುದೇ, ನಮ್ಮ ಚಾರಿತ್ರ್ಯ ನಿರ್ವಹಣೆಯ ನಿಜವಾದ ಅರ್ಥ.
ಲಾಲಾಜಿ
January 16th 2025
ನಿಮಗೆ ಧ್ಯಾನ ಮಾಡಲು ಸಮಯವಿಲ್ಲದಿದ್ದರೆ, ಆಗಲೇ ಹೆಚ್ಚು ಧ್ಯಾನ ಮಾಡಬೇಕಾದ ಅಗತ್ಯ ನಿಮಗಿರುತ್ತದೆ.
ದಾಜಿ
January 15th 2025
ಆತ್ಮಾವಲೋಕನದಿಂದ ವಿವೇಕವು ಬೆಳೆಯುತ್ತದೆ ಎನ್ನುವುದು ವಾಸ್ತವ. ಆದರೆ, ಇದಕ್ಕೆ ಸಮಯ ಯಾರಿಗಿದೆ? ಯಾರು ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೊ, ಅವರಿಗೆ ಸಮಯ ದೊರಕುತ್ತದೆ.
ಬಾಬೂಜಿ
January 14th 2025
ಪ್ರಯತ್ನವನ್ನು ಜೀವಂತಗೊಳಿಸಿ, ಉತ್ಸಾಹದ ತುಡಿತವನ್ನುಂಟುಮಾಡುವಂತಹುದು ಏನು? ಅದೇ ನಮ್ಮ ಮನೋಭಾವ ಮತ್ತು ಆಸಕ್ತಿ. ಯಶಸ್ಸಿನ ಶೇಕಡಾ 95ರಷ್ಟು ಭಾಗ ಮನೋಭಾವವೇ ಆಗಿದೆ.
ದಾಜಿ
January 13th 2025
ನಾವು ಜಗತ್ತನ್ನು ಬದಲಾಯಿಸಲಾಗುವುದಿಲ್ಲ. ಆದರೆ ನಾವು ಬದಲಾದರೆ, ಜಗತ್ತು ಬದಲಾಗುತ್ತದೆ.
ಚಾರೀಜಿ
January 12th 2025
ನಿಮ್ಮ ಆಲೋಚನೆಗಳು ಸರಿಯೇ-ತಪ್ಪೇ, ಪ್ರಯೋಜನಕಾರಿಯೇ-ಅಪ್ರಯೋಜಕವೇ ಎಂದು ಮೌಲ್ಯಮಾಪನ ಮಾಡಲು ಧ್ಯಾನ ನಿಮಗೆ ನೆರವಾಗುತ್ತದೆ.
ದಾಜಿ
January 11th 2025
ನೀವು ಹೆಚ್ಚಾಗಿ ಯಾರೊಂದಿಗಿರುವಿರೋ ಅಂತಹ ಜನರಿಂದ ನಿಮ್ಮ ನಡತೆ ಹಾಗು ಅಭ್ಯಾಸಗಳು ಪ್ರಭಾವಿತವಾಗಿರುತ್ತವೆ.
ಲಾಲಾಜಿ
January 10th 2025
ಆಸೆಗಳಿಂದ ಸಂಪೂರ್ಣವಾಗಿ ಮುಕ್ತವಾದಾಗ ಏನಾಗುತ್ತದೆ? ಅಂತಹ ಹೃದಯಗಳು ಕೃತಜ್ಞತೆಯಿಂದ ತುಂಬಿರುತ್ತವೆ.