
ಆಧ್ಯಾತ್ಮಿಕತೆಯು ದಿಟ್ಟ ಮತ್ತು ಧೈರ್ಯಶಾಲಿಗಳಿಗಾಗಿ ಇರುವ ಮಾರ್ಗ.

ಗತಕಾಲದ ಬಗ್ಗೆ ಚಿಂತಿಸದಿರಿ. ಆದರೆ, ವರ್ತಮಾನದಲ್ಲಿ ನಿಮ್ಮನ್ನು ನೀವು ತಿದ್ದಿಕೊಳ್ಳಿ, ಆಗ ಭವಿಷ್ಯವು ಗತಕ್ಕಿಂತ ಉತ್ತಮವಾಗಿರುತ್ತದೆ.

ಪ್ರಾರ್ಥನಾತ್ಮಕ ಹೃದಯವು ದಿವ್ಯಸತ್ತ್ವವನ್ನು ಎಲ್ಲೆಡೆಗೂ ಕೊಂಡೊಯ್ಯುತ್ತದೆ.

ಮಾನವನ ಆತ್ಮದ ಶುದ್ಧತೆಯು, ಆತನಲ್ಲಿರುವ ವಿವೇಚನಾ ಶಕ್ತಿಯ ನೇರ ಅನುಪಾತದಲ್ಲಿರುತ್ತದೆ.

ನಮ್ಮ ಇಷ್ಟಾನಿಷ್ಟಗಳ ಕಾರಣವಾಗಿ ನಾವು ಉದ್ವೇಗದಿಂದ ವರ್ತಿಸಿದರೆ, ನಮ್ಮ ಮನಸ್ಸಿನಲ್ಲಿ ಅನಗತ್ಯ ಸಂಸ್ಕಾರಗಳು ರೂಪುಗೊಳ್ಳಲು ಅನುವು ಮಾಡಿಕೊಡುತ್ತೇವೆ.

ಸುಳ್ಳನ್ನಾಡಲು ನಾವು ಬಹಳ ಸೃಜನಶೀಲರಾಗಿರಬೇಕು, ಆದರೆ ಸತ್ಯ ನುಡಿಯಲು ನೀವು ಸರಳವಾಗಿದ್ದರೆ ಸಾಕು. ಸತ್ಯವು ಶುದ್ಧವಾಗಿದ್ದು, ಹೃದಯದಿಂದ ನೇರವಾಗಿ ಬರುತ್ತದೆ

ಸಹಜ ಸಾಧನೆಯನ್ನು ಅಳವಡಿಸಿಕೊಳ್ಳಿ. ಸಾಧನೆಯಿಲ್ಲದೆ ಏನನ್ನೂ ಪಡೆಯಲಾಗುವುದಿಲ್ಲ, ಇದನ್ನು ಒಂದು ರಹಸ್ಯವೆಂದು ತಿಳಿಯಿರಿ. ಅಧ್ಯಾತ್ಮದ ಸಾಧನೆಯಷ್ಟೇ ಅಲ್ಲ, ಲೌಕಿಕ ವ್ಯವಹಾರಗಳಲ್ಲೂ ಸಾಧನೆಯ ಅಗತ್ಯವಿದೆ.

ಸರಳತೆಯೆನ್ನುವುದು ದೌರ್ಬಲ್ಯವಲ್ಲ, ಪರಿಶುದ್ಧತೆ ದೌರ್ಬಲ್ಯವಲ್ಲ. ನಾವು ಅನುವು ಮಾಡಿಕೊಟ್ಟರೆ, ಅವು ಮಹಾಶಕ್ತಿಗಳಾಗುತ್ತವೆ..

ನೀವು ಜೀವನದಲ್ಲಿ ಕಷ್ಟಕರ ಸನ್ನಿವೇಶಗಳನ್ನು ಎದುರಿಸಿದಾಗ, ನೀವು ಮೊದಲಿಗಿಂತ ಬಲಶಾಲಿಯಾಗಿ ಹೊರಹೊಮ್ಮುತ್ತೀರಿ.

ಪೂರ್ಣಿಮೆಯ ಚಂದ್ರ ಅದೆಷ್ಟೇ ಸುಂದರವಾಗಿದ್ದರೂ, ಸೂರ್ಯನಿಲ್ಲದೆ ಅದರ ಅಸ್ತಿತ್ವವಿಲ್ಲ.

ಸಮಾಧಿ ಎಂದರೆ ಸೃಷ್ಟಿಗೆ ಮುಂಚೆ ಇದ್ದಂತಹ ಪರಿಪೂರ್ಣ ಸಮತೋಲನದ ಸ್ಥಿತಿ.

ಅರಣ್ಯದಲ್ಲಿ ಜೀವಿಸುವ ಮನುಷ್ಯನು ವರ್ಷಗಳ ಕಾಲ ಪ್ರಾಣಿಗಳನ್ನೇ ನೋಡುತ್ತಿರಲು, ಅವನು ಮತ್ತೊಬ್ಬ ಮನುಷ್ಯನನ್ನು ಕಂಡಾಗ ಅವನನ್ನು ಸಹ ಪ್ರಾಣಿಯೆಂದು ಭಾವಿಸುವ ಸಮಯ ಬರುವುದು. ನಾವು ದುಷ್ಟಸಂಗತಿಗಳ ಪರ ವಹಿಸಿದರೆ, ಪ್ರಕಾಶಿತ ಭಾಗವೂ ಅಂಧಕಾರದಂತೆ ಕಾಣತೊಡಗುವುದು.

ಧೃತಿಗನುಗುಣವಾಗಿ, ಅನ್ಯರನ್ನು ಅವರ ಚಿಂತೆಯಿಂದ ಮುಕ್ತಗೊಳಿಸಿ ಸಂತೋಷದಿಂದಿರುವಂತೆ ಅವರ ವೇದನೆಗಳಿಂದ ಪಾರು ಮಾಡಿರಿ.

ಒಂದು ಮಗುವು ಕೌತುಕ ಪಡಲು ಆರಂಭಿಸಿದಾಗ, ಆಲೋಚನಾ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಹಾಗು ಅದನ್ನು ವ್ಯಕ್ತಪಡಿಸಲು ಆ ಮಗು ಪಾಲಕರಿಂದ ಪ್ರೇರಿತಗೊಳ್ಳುತ್ತದೆ. ಆಲೋಚನೆಗಳು ಸಂಗ್ರಹಿತಗೊಂಡು ಶಕ್ತಿಯಾಗಿ ಮಾರ್ಪಟ್ಟಾಗ, ಅವು ಆಟವಾಡಲು ಕಾರ್ಯನಿರತ ಸಲಕರಣೆಗಳಾಗುತ್ತವೆ.