ಅಶಾಂತಿಯ ರಮ್ಯತೆ ಶಾಂತಿಗಿಂತ ಹೆಚ್ಚಿನದೆಂದು ನಿಮಗೆ ಭರವಸೆ ಕೊಡುತ್ತೇನೆ. ಅಸಮಾಧಾನವು ಪರಮಾವಧಿಯನ್ನು ಮುಟ್ಟಿದಾಗ ಶಾಂತಿಯ ಆರಂಭ ಚಿಹ್ನೆಗಳು ಕಂಡುಬರಲೂಬಹುದು.
ಬಾಬೂಜಿ
April 29th 2024
ನೀವು ಅರಸುತ್ತಿದ್ದುದೆಲ್ಲ ನಿಮ್ಮ ಸಮೀಪವೇ ದೊರೆಯುವುದು, ಅಥವಾ ನಿಮ್ಮೊಂದಿಗೇ ಇರುವುದು, ಅಲ್ಲಲ್ಲ, ನೀವು ಹುಡುಕುತ್ತಿದ್ದುದು ವಸ್ತುತಃ ನಿಮ್ಮನ್ನೇ.
ಬಾಬೂಜಿ
April 28th 2024
ದೇವರು ಪ್ರತಿಯೊಬ್ಬನಲ್ಲೂ ವಾಸಿಸುವನಾದುದರಿಂದ ಯಾರೊಂದಿಗೂ ತಿರಸ್ಕಾರದಿಂದ ವರ್ತಿಸುವ ಕಾರಣವಿಲ್ಲ.
ಬಾಬೂಜಿ
April 27th 2024
ನಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ, ಗುರಿಯು ಯಾವಾಗಲೂ ದೃಷ್ಟಿಯಲ್ಲಿರಬೇಕು, ಇದಕ್ಕಾಗಿ ಪರಿಶ್ರಮ ಅತ್ಯಗತ್ಯ. ಆದರೂ, ಹೃದಯವನ್ನೊಳಗೊಂಡ ಭಾವನೆಯೂ ಅಷ್ಟೇ ಅಗತ್ಯ. ಪರಿಶ್ರಮವನ್ನು ಒತ್ತಾಯದಿಂದ ಮಾಡಿದರೆ, ಅದರಿಂದ ಏನೂ ಪ್ರಯೋಜನವಿಲ್ಲ.
ಬಾಬೂಜಿ
April 26th 2024
ನಮ್ಮ ಆತ್ಮ ಮತ್ತು ಎಲ್ಲರ ಆತ್ಮವೂ ಒಂದೇ ಆಗಿದೆ.
ಲಾಲಾಜಿ
April 25th 2024
ನೀವು ಆತ್ಮಾವಲೋಕನ ಮತ್ತು ವಿಶ್ಲೇಷಣೆ ಮಾಡಿಕೊಳ್ಳುವಾಗ, ಸದಾಕಾಲವೂ ಜಾಗರೂಕರಾಗಿರಬೇಕು - ನನ್ನನ್ನು ನಾನು ಮತ್ತಷ್ಟು ಹೇಗೆ ಸುಧಾರಿಸಿಕೊಳ್ಳಬಹುದು?
ದಾಜಿ
April 24th 2024
ಜ್ಞಾನವೇ ಅಂತ್ಯವಲ್ಲ, ಅದು ಕೇವಲ ಅಂತ್ಯದ ಒಂದು ಸಾಧನ.
ಲಾಲಾಜಿ
April 23rd 2024
ಸರಳತೆಯೆನ್ನುವುದು ದೌರ್ಬಲ್ಯವಲ್ಲ, ಪರಿಶುದ್ಧತೆ ದೌರ್ಬಲ್ಯವಲ್ಲ. ನಾವು ಅನುವು ಮಾಡಿಕೊಟ್ಟರೆ, ಅವು ಮಹಾಶಕ್ತಿಗಳಾಗುತ್ತವೆ..
ದಾಜಿ
April 22nd 2024
ಹೆಚ್ಚು ಹೆಚ್ಚು ಪ್ರೀತಿಸಿದಂತೆ, ನೀವು ಪ್ರೀತಿಯನ್ನು ಕಳೆದುಕೊಳ್ಳುವುದಿಲ್ಲ, ಬದಲಾಗಿ ಹೆಚ್ಚು ಹೆಚ್ಚು ಪ್ರೀತಿಯನ್ನು ಪಡೆಯುತ್ತೀರಿ.
ನಮ್ಮ ಮನೆಯು, ಸಮಾಧಾನ ಮತ್ತು ಸಹಿಷ್ಣುತೆ ಮುಂತಾದವುಗಳ ಶಿಕ್ಷಣ ನೀಡುವ ತಾಣ. ಇದು ಶ್ರೇಷ್ಠತಮ ರೂಪದ ತಪಸ್ಸು ಮತ್ತು ತ್ಯಾಗವಾಗಿದೆ.
ಲಾಲಾಜಿ
April 19th 2024
ನಿಜವಾದ ಪ್ರೇಮವನ್ನು ಬೆಳೆಸಿಕೊಂಡಾಗ, ಎಲ್ಲರೂ ಸಮಾನವಾಗಿ ಕಾಣುತ್ತಾರೆ.
ಬಾಬೂಜಿ
April 18th 2024
ಪ್ರೇಮವು ಪ್ರೀತಿಪಾತ್ರರಿಗೆ ಸ್ವಾತಂತ್ರ್ಯ ಕೊಡಬೇಕು. ಪಂಜರದಿಂದ ಹಾರಿ ಹೋದ ಪಕ್ಷಿ ಕೂಡ ಮರಳಿ ಬರುತ್ತದೆ.
ಚಾರೀಜಿ
April 17th 2024
ಸವಾಲು ಎಂತಹುದೇ ಇರಲಿ, ಆತ್ಮವಿಶ್ವಾಸದೊಂದಿಗೆ ಮುಂದಿನ ಹಾದಿಯನ್ನು ಕಂಡುಕೊಳ್ಳಿ.
ದಾಜಿ
April 16th 2024
ನಮ್ಮ ಕಂಪನ ಕ್ಷೇತ್ರವು ಎಷ್ಟು ಹೆಚ್ಚು ಪವಿತ್ರ ಮತ್ತು ಸರಳವಾಗಿರುವುದೋ ಅಷ್ಟು ಹೆಚ್ಚು ಸುಪ್ತಪ್ರಜ್ಞೆ, ಪ್ರಜ್ಞೆ ಮತ್ತು ಉನ್ನತಪ್ರಜ್ಞೆಯ ವ್ಯಾಪ್ತಿಯನ್ನು ನಾವು ಗಮನಿಸಬಹುದು, ಅನ್ವೇಷಿಸಬಹುದು ಮತ್ತು ವಿಸ್ತರಿಸಬಹುದು.
ದಾಜಿ
April 15th 2024
ಅತ್ಯಲ್ಪ ಪ್ರಯತ್ನದಿಂದ ಉತ್ತಮ ಫಲಿತಾಂಶ ನೀಡಲು ನಮ್ಮ ಎಲ್ಲ ಸಾಮರ್ಥ್ಯಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವುದೇ ಬುದ್ಧಿವಂತಿಕೆ.
ದಾಜಿ
April 14th 2024
ಧ್ಯಾನ ಮಾಡಲು ನಾವು ಅಳವಡಿಸಿಕೊಳ್ಳುವ ವಿಧಾನಗಳಿಂದ, ನಮ್ಮ ಹೃದಯದಲ್ಲಿ ನಿಜವಾದ ಪ್ರೇಮ ಪ್ರಕಟಗೊಳ್ಳಬೇಕು.
ಬಾಬೂಜಿ
April 13th 2024
ಮಾನವನ ಆತ್ಮದ ಶುದ್ಧತೆಯು, ಆತನಲ್ಲಿರುವ ವಿವೇಚನಾ ಶಕ್ತಿಯ ನೇರ ಅನುಪಾತದಲ್ಲಿರುತ್ತದೆ.
ಲಾಲಾಜಿ
April 12th 2024
ನಮ್ಮ ಇಷ್ಟಾನಿಷ್ಟಗಳ ಕಾರಣವಾಗಿ ನಾವು ಉದ್ವೇಗದಿಂದ ವರ್ತಿಸಿದರೆ, ನಮ್ಮ ಮನಸ್ಸಿನಲ್ಲಿ ಅನಗತ್ಯ ಸಂಸ್ಕಾರಗಳು ರೂಪುಗೊಳ್ಳಲು ಅನುವು ಮಾಡಿಕೊಡುತ್ತೇವೆ.
ದಾಜಿ
April 11th 2024
ಒಮ್ಮೆ ನಿಮ್ಮ ಹೃದಯ ಪರಿಶುದ್ಧವಾದರೆ, ಆಂತರಿಕ ದಿಕ್ಸೂಚಿಯು ಬಹಳ ಶಕ್ತಿಯುತವಾಗುತ್ತದೆ. ಪರಿಶುದ್ಧ ಹೃದಯದಿಂದ, ನೀವು ಅನೇಕ ಕೆಲಸಗಳನ್ನು ಮಾಡಲು ಸಾಧ್ಯ.
ದಾಜಿ
April 10th 2024
ನಮ್ಮ ಭವಿಷ್ಯವನ್ನು ಬದಲಾಯಿಸಬಹುದು, ಆದರೆ ಅದು ಕೇವಲ ವರ್ತಮಾನದಲ್ಲಿ ಮಾತ್ರ ಸಾಧ್ಯ.
ದಾಜಿ
April 9th 2024
ಆತ್ಮಗೌರವ ಎಂದರೆ ನಿಮಗೆ ಬೇರೆಯವರು ಏನನ್ನು ಮಾಡಬಾರದೆಂದು ಅಂದುಕೊಳ್ಳುತ್ತೀರೋ ಅದನ್ನು ಬೇರೆಯವರಿಗೆ ಮಾಡದಿರುವುದು.
ಬಾಬೂಜಿ
April 8th 2024
ಸುಳ್ಳನ್ನಾಡಲು ನಾವು ಬಹಳ ಸೃಜನಶೀಲರಾಗಿರಬೇಕು, ಆದರೆ ಸತ್ಯ ನುಡಿಯಲು ನೀವು ಸರಳವಾಗಿದ್ದರೆ ಸಾಕು. ಸತ್ಯವು ಶುದ್ಧವಾಗಿದ್ದು, ಹೃದಯದಿಂದ ನೇರವಾಗಿ ಬರುತ್ತದೆ
ದಾಜಿ
April 7th 2024
ಸಹಜ ಸಾಧನೆಯನ್ನು ಅಳವಡಿಸಿಕೊಳ್ಳಿ. ಸಾಧನೆಯಿಲ್ಲದೆ ಏನನ್ನೂ ಪಡೆಯಲಾಗುವುದಿಲ್ಲ, ಇದನ್ನು ಒಂದು ರಹಸ್ಯವೆಂದು ತಿಳಿಯಿರಿ. ಅಧ್ಯಾತ್ಮದ ಸಾಧನೆಯಷ್ಟೇ ಅಲ್ಲ, ಲೌಕಿಕ ವ್ಯವಹಾರಗಳಲ್ಲೂ ಸಾಧನೆಯ ಅಗತ್ಯವಿದೆ.
ಲಾಲಾಜಿ
April 6th 2024
ಸ್ವೀಕಾರವು ವಿಕಾಸದ ಗುರುತು. ಏನೇ ಬರಲಿ, ನಾನು ಅದನ್ನು ಎದುರಿಸಲು ಸಿದ್ಧವಾಗಿದ್ದೇನೆ ಎನ್ನುವಂತೆ ನಮ್ಮ ಸನ್ನದ್ಧತೆ ಅಥವಾ ಮನೋಭಾವವಿರಬೇಕು.
ದಾಜಿ
April 5th 2024
ನಾವು ಜಗತ್ತನ್ನು ಬದಲಾಯಿಸಲಾಗುವುದಿಲ್ಲ. ಆದರೆ ನಾವು ಬದಲಾದರೆ, ಜಗತ್ತು ಬದಲಾಗುತ್ತದೆ.
ಚಾರೀಜಿ
April 4th 2024
ನಾವು ಸ್ವೀಕರಿಸಲು ಮತ್ತು ಪ್ರೀತಿಸಲು ಕಲಿತಾಗ, ನಮ್ಮ ಜೀವನದ ಪ್ರತಿಯೊಂದು ಅಂಶವೂ ಪ್ರವರ್ಧಿಸುತ್ತದೆ.
ದಾಜಿ
April 3rd 2024
ಸಾಧಕನನ್ನು ಕಾಡುವುದು ಉದ್ಭವಿಸುವ ವಿಚಾರಗಳಲ್ಲ, ಆದರೆ ಆತನು ಅವುಗಳಿಗೆ ನೀಡುವ ಅತಿಯಾದ ಗಮನವು ಅವನನ್ನು ನೇರವಾಗಿ ಸಂಘರ್ಷಕ್ಕಿಳಿಸುತ್ತದೆ. ಪ್ರತಿಯಾಗಿ, ವಿಚಾರಗಳಿಗೆ ಅಧಿಕ ಬಲ ದೊರೆತು, ತೊಂದರೆಯು ಉಲ್ಬಣಗೊಳ್ಳುತ್ತದೆ.
ಬಾಬೂಜಿ
April 2nd 2024
ನಾವು ಹೆಚ್ಚು ದಯಾಳು, ಹೆಚ್ಚು ಸಹಾನುಭೂತಿಯುಳ್ಳವರು ಮತ್ತು ಹೆಚ್ಚು ದಾನಿಗಳಾಗಿ ಪರಿವರ್ತಿತರಾಗದಿದ್ದರೆ ಧ್ಯಾನ ಮಾಡುವುದರ ಅರ್ಥವೇನು?