ನಾವು ಯೋಗ್ಯರೀತಿಯಲ್ಲಿ ಧ್ಯಾನ ಮಾಡಿದರೆ ಪ್ರತಿ ಕ್ಷಣವೂ ಅಮರವಾಗಬಹುದು. ಒಂದರ್ಥದಲ್ಲಿ, ನಾವು ಸಮಯದ ಸೃಷ್ಟಿಕರ್ತರಾಗುತ್ತೇವೆ.
ಚಾರೀಜಿ
February 27th 2023
ಉತ್ಕೃಷ್ಟವಾದುದನ್ನು ಸಾಧಿಸಲು ನಿಮ್ಮ ಅಭ್ಯಾಸದಲ್ಲಿ ಒಂದು ಬಗೆಯ ಕ್ರಮಬದ್ಧತೆ, ಹರ್ಷೋಲ್ಲಾಸ ಮತ್ತು ಒಂದು ಬಗೆಯ ಚಡಪಡಿಕೆಯನ್ನು ಉಂಟುಮಾಡಿಕೊಳ್ಳಿ.
ದಾಜಿ
February 26th 2023
ಹಾರ್ಟ್ ಫುಲ್ ನೆಸ್ ಎಂದರೆ ಹೃದಯದ ಕರೆಯನ್ನು ಅನುಸರಿಸುವುದು.
ದಾಜಿ
February 25th 2023
ಆಧ್ಯಾತ್ಮಿಕತೆಯು ದಿಟ್ಟ ಮತ್ತು ಧೈರ್ಯಶಾಲಿಗಳಿಗಾಗಿ ಇರುವ ಮಾರ್ಗ.
ದಾಜಿ
February 24th 2023
ಹೆಚ್ಚು ಹೆಚ್ಚು ಪ್ರೀತಿಸಿದಂತೆ, ನೀವು ಪ್ರೀತಿಯನ್ನು ಕಳೆದುಕೊಳ್ಳುವುದಿಲ್ಲ, ಬದಲಾಗಿ ಹೆಚ್ಚು ಹೆಚ್ಚು ಪ್ರೀತಿಯನ್ನು ಪಡೆಯುತ್ತೀರಿ.
ಚಾರೀಜಿ
February 23rd 2023
ಧ್ಯಾನದಲ್ಲಿ, ನಮ್ಮ ಪ್ರಜ್ಞೆಯು ನಮ್ಮ ಅಸ್ತಿತ್ವದ ಮೂಲವಾದ ಅಂತರಾತ್ಮನೆಡೆ ಚಲಿಸುತ್ತದೆ.
ದಾಜಿ
February 22nd 2023
ನಿಯತಿಯ ಮೊದಲ ತತ್ವವೆಂದರೆ ಅದನ್ನು ನಾವು ವರ್ತಮಾನದಲ್ಲಿ ಮಾತ್ರ ಬದಲಾಯಿಸಬಹುದು.
ದಾಜಿ
February 21st 2023
ಯೋಗ್ಯ ಮಾರ್ಗ ಹಾಗು ಮಾರ್ಗದರ್ಶನಗಳೊಂದಿಗೆ, ಸದೃಢ ಇಚ್ಛಾಶಕ್ತಿಯೊಂದೇ ಪರಿಪೂರ್ಣ ಯಶಸ್ಸಿಗೆ ಅವಶ್ಯಕವಾದುದು.
ಬಾಬೂಜಿ
February 20th 2023
ನಮ್ಮ ಗುರಿಸಾಧನೆಯ ಒಂದು ಪ್ರಮುಖ ಅಂಶವೆಂದರೆ, ಜಯಗಳಿಸುವ ನಮ್ಮ ಸಾಮರ್ಥ್ಯದ ಮೇಲಿರುವ ಆತ್ಮವಿಶ್ವಾಸ
ಬಾಬೂಜಿ
February 19th 2023
ನಾವು ಹೃದಯವನ್ನು ಆಲಿಸಿದಾಗ, ಆಯ್ಕೆಗಳನ್ನು ಮಾಡುವ ವಿಸ್ತೃತ ಮಾನಸಿಕ ಪ್ರಕ್ರಿಯೆಯ ಅವಶ್ಯಕತೆ ನಮಗಿರುವುದಿಲ್ಲ; ಯಾವುದು ಸರಿ ಎಂದು ನಮಗೆ ಯಾವಾಗಲೂ ತಿಳಿದಿರುತ್ತದೆ.
ದಾಜಿ
February 18th 2023
ನಾವು ನಮ್ಮ ಸುಪ್ತಪ್ರಜ್ಞೆಯೊಂದಿಗೆ ಧ್ಯಾನದಲ್ಲಿ ನಿರತರಾಗಿರುವಾಗ, ನಮ್ಮ ಪ್ರಜ್ಞಾಪೂರ್ವಕ ಮನಸ್ಸಿನ ಚಟುವಟಿಕೆಗಳಿಂದಾಗಿ ಆಲೋಚನೆಗಳು ಹರಿದು ಬರುತ್ತಿರುತ್ತವೆ.
ಬಾಬೂಜಿ
February 17th 2023
ಜೀವನವು ಬಂದಂತೆ ನಾವು ಎದುರಿಸುತ್ತೇವೆ, ಅದರಂತೆ ಮುಂದುವರಿಯುತ್ತೇವೆ. ಹೀಗೆಯೇ ನಾವು ನಮ್ಮ ನಿಯತಿಯನ್ನು ರೂಪಿಸಿಕೊಳ್ಳುವುದು.
ದಾಜಿ
February 16th 2023
ಧ್ಯಾನಸ್ಥ ಹೃದಯದಲ್ಲಿ ಪ್ರೀತಿಯು ಪರಮಶಕ್ತವಾದಾಗ, ಅದು ಸ್ಪರ್ಶಿಸಿದೆಲ್ಲವೂ ಚಿನ್ನವಾಗುತ್ತದೆ.
ದಾಜಿ
February 15th 2023
ಜನರು ಏಕೆ ಆಸಕ್ತಿ ಕಳೆದುಕೊಳ್ಳುತ್ತಾರೆ? ಅವರು ಘಾಸಿಗೊಂಡಾಗ ಅಥವಾ ತಮ್ಮನ್ನು ಕೇಳಿಸಿಕೊಳ್ಳುವವರಿಲ್ಲ ಎಂದು ಅನಿಸಿದಾಗ ಅದು ಸಹಜ.
ದಾಜಿ
February 14th 2023
ಜಗತ್ತಿನಲ್ಲಿರುವ ಏಕೈಕ ಶಾಶ್ವತ ವಿಷಯವೆಂದರೆ, ಬದಲಾವಣೆ.
ಚಾರೀಜಿ
February 13th 2023
ನಿಮ್ಮ ಉದ್ಯೋಗಿಗಳಿಗೆ ಅಥವಾ ಸಹವರ್ತಿಗಳಿಗೆ ಕಾರ್ಯನಿರ್ವಹಿಸಲು ಸ್ವಾತಂತ್ರ್ಯವನ್ನು ನೀಡಿ ಮತ್ತು ಅವರು ವಸಂತ ಕಾಲದ ಹೂವಿನಂತೆ ಅರಳುವುದನ್ನು ನೋಡಿ.
ದಾಜಿ
February 12th 2023
ನೀವು ಪ್ರೀತಿಯನ್ನು ಬೆಳೆಸಿಕೊಂಡು, ನಿಮ್ಮ ವಿಚಾರವನ್ನು ಸಂಪೂರ್ಣ ಅನುರಕ್ತಿಯಿಂದ ಗುರಿಯ ಮೇಲೆ ಕೇಂದ್ರೀಕರಿಸಿದಾಗ, ಧ್ಯಾನವು ಗಾಢವಾಗುತ್ತದೆ.
ಬಾಬೂಜಿ
February 11th 2023
ನಾವು ವರ್ತಮಾನದ ಈ ಕ್ಷಣದಲ್ಲಿ ಹೇಗೆ ಬದುಕುತ್ತೇವೆ ಎಂಬುದು ಭವಿಷ್ಯವನ್ನು ನಿರ್ಧರಿಸುತ್ತದೆ.
ದಾಜಿ
February 10th 2023
ಆಧ್ಯಾತ್ಮಿಕತೆಯು ಪ್ರಗತಿಯ ಅಥವಾ ಕಾಲಯಾನವಲ್ಲ, ಇದು ಅನಂತದೆಡೆಗಿನ ಪಯಣ.
ಚಾರೀಜಿ
February 9th 2023
ನಮ್ಮ ಹೃದಯವು ಆಧ್ಯಾತ್ಮಿಕ ಸ್ಥಿತಿಗಳ ಭಂಡಾರವಾಗಿದೆ.
ದಾಜಿ
February 8th 2023
ಅಹಂ ಒಂದು ಕಪ್ಪುರಂಧ್ರದಂತೆ. ಇದು ನಮ್ಮ ಪ್ರಜ್ಞೆಯ ಮೇಲೆ ಅತೀ ಹೆಚ್ಚಿನ ಗುರುತ್ವಾಕರ್ಷಣೆಯನ್ನು ಹೊಂದಿರುತ್ತದೆ. ಇದು ಪ್ರಜ್ಞೆ ವಿಸ್ತಾರಗೊಳ್ಳಲು ಅವಕಾಶ ನೀಡುವುದಿಲ್ಲ.
ದಾಜಿ
February 7th 2023
ಆಂತರಿಕ ಶಾಂತಿ ಮತ್ತು ಹಗುರತೆಗಳು ನಮ್ಮ ಅಭ್ಯಾಸದ ಸಹಜ ಫಲವಾದಾಗ, ನಮ್ಮ ಆಧ್ಯಾತ್ಮಿಕ ತರಬೇತಿಯು ಪರಿಣಾಮಕಾರಿಯಾಗಿದೆ ಎಂದರ್ಥ.
ಬಾಬೂಜಿ
February 6th 2023
ಹೃದಯದ ಸಂಕೇತಗಳೊಂದಿಗೆ ಸದಾ ಸಮಶ್ರುತಿಯಲ್ಲಿರಿ.
ದಾಜಿ
February 5th 2023
ಎಲ್ಲ ಸವಾಲುಗಳನ್ನೂ ಸಂತೋಷದಿಂದ ಮತ್ತು ಹರ್ಷಚಿತ್ತದಿಂದ ಸ್ವೀಕರಿಸಿ, ತದನಂತರದ ಸೊಗಸನ್ನು ನೋಡಿ.
ದಾಜಿ
February 4th 2023
ಪ್ರೀತಿಯಿಂದ ಮಾತ್ರ ನೀವು ಹೃದಯಗಳನ್ನು ಗೆಲ್ಲಲು ಸಾಧ್ಯ. ಅನ್ಯ ಮಾರ್ಗವಿಲ್ಲ.
ಲಾಲಾಜಿ
February 3rd 2023
ನಮ್ಮ ಎಲ್ಲ ಗುಣಲಕ್ಷಣಗಳು ಮಿತವಾಗಿದ್ದರೆ ಶಾಂತಿ ಇರುತ್ತದೆ, ಮತ್ತು ಇಚ್ಛೆಗಳ ನಡುವೆಯೂ ನಾವು ಇಚ್ಛಾರಾಹಿತ್ಯ ಸ್ಥಿತಿಯನ್ನು ಸಾಧಿಸುತ್ತೇವೆ.
ಲಾಲಾಜಿ
February 2nd 2023
ಮನಸ್ಸಿನ ಸಮಸ್ಥಿತಿಯು, ಮಾನವನು ವಿವಿಧ ಸನ್ನಿವೇಶಗಳಲ್ಲಿ, ತನ್ನೆಲ್ಲ ಚಟುವಟಿಕೆಗಳಲ್ಲಿ ತೋರುವ ಋಜು ಮನೋಭಾವದ ಒಂದು ಅಭಿವ್ಯಕ್ತಿ. ಸ್ಥೂಲವಾಗಿ ಹೇಳುವುದಾದರೆ, ಅದು ಆತನ ಶೀಲದ ಪ್ರತಿಫಲನ.
ಲಾಲಾಜಿ
February 1st 2023
ಸಮುದ್ರ ಮತ್ತು ಹನಿಗಳೆರಡೂ ಒಂದೇ. ಹನಿಯಲ್ಲಿ ಸಮುದ್ರ ಮತ್ತು ಹನಿಯಾಗಿ ಸಮುದ್ರ - ಹೀಗೆ ಒಂದೇ ರೂಪ ಸರ್ವವ್ಯಾಪಿಯಾಗಿರುತ್ತದೆ.